ಶ್ರೀ ಮೌನೇಶ್ವರ ವಚನ ಮಾಲಿಕೆ - 01

 

ಮೌನೇಶ್ವರರ ವಚನಗಳು - 01


" ಸ್ನಾನ ಜಪ ತಪಗಳನು, ಜ್ಞಾನ ತತ್ತ್ವ ಪುರಾಣಗಳನು
ಮಾನವ ಜನ್ಮಕ್ಕೆ ಬಂದು ಅತಿಗಳೆದರೆ
ಶ್ವಾನನ ಗರ್ಭದಿ ಜನಿಸುವರು, ಬಸವಣ್ಣ "


ವಚನಾರ್ಥ:-
ಮಾನವ ಜನ್ಮ ತಾಳಿ ನಾವು ಇಹಕ್ಕೆ ಬಂದ ಮೇಲೆ ಸ್ನಾನ, ಜಪ, ತಪಗಳಂಥ ನಿತ್ಯ ಕರ್ಮಾದಿಗಳನ್ನು ಹಾಗೂ ತತ್ತ್ವ, ಪುರಾಣಗಳನ್ನು ಶಿರಸಾ ವಹಿಸಿ ಪರಿಪಾಲಿಸಲೇಬೇಕು. ಅದು ಮನುಜನ ಕರ್ತವ್ಯವೂ ಹೌದು. ಇವುಗಳನನುದಿನ ಪಾಲಿಸದಿದ್ದಲ್ಲಿ ಅಂಥವರು ನಾಯಿಯ ಗರ್ಭದಲ್ಲಿ ಜನಿಸುವರೆಂಬುದು ವಚನದ ಅರ್ಥ.

ಈ ಮೌನೇಶ್ವರರ ವಚನವನ್ನು ವಿಡೀಯೋ ಮೂಲಕ ಇಲ್ಲಿ ಕೇಳಿ



Post a Comment

0 Comments