![]() |
| ಮೌನೇಶ್ವರರ ವಚನಗಳು - 512 |
" ಮುನುಗದ ಕಸ್ತೂರಿಯನು ಹಣೆಗೆ ಧರಿಸಲು ಹೀನಾಯಿತು
ನಿಮ್ಮ ಶೀಲ ಹತವಾಯಿತು, ಬಸವಣ್ಣ "
ವಚನಾರ್ಥ :-
ಸಾಮಾನ್ಯವಾಗಿ ಕಸ್ತೂರಿ ಮೃಗದಿಂದ ಕಸ್ತೂರಿ ಹುಟ್ಟುತ್ತದೆ. ವ್ಯಂಗ್ಯಾರ್ಥವಾಗಿ ಮೌನೇಶ್ವರರು ಪುನುಗದ(ಬೆಕ್ಕು) ಕಸ್ತೂರಿಯನ್ನು ಹಣೆಗೆ ಹಚ್ಚಿಕೊಳ್ಳಲು ಮನುಷ್ಯನ ಶೀಲ ಚಾರಿತ್ರ್ಯಗಳು ಹೀನವಾಗುತ್ತವೆ ಎನ್ನುವಲ್ಲಿ ಮನುಷ್ಯನ ವಿವೇಕ ರಹಿತ ನಡೆಗಳು ಆತನ ಸಚ್ಚಾರಿತ್ರ್ಯವನ್ನು ಹಾಳುಮಾಡುತ್ತವೆಂಬುದು ಇಲ್ಲಿನ ಭಾವ.


0 Comments