![]() |
| ಮೌನೇಶ್ವರರ ವಚನಗಳು - 514 |
" ರೊಕ್ಕುಳ್ಳ ಕಾಲಕೆ ಮುಚ್ಚುವ ಪಾವಡಗಳು
ರೊಕ್ಕ ಹೋದ ಮರುದಿನ ಭಿಕ್ಷೆ ಬೇಡಿ ಉಣಬೇಕು
ಕುಕ್ಷಿಗಿನ್ನೆಲ್ಲಿ ಹೊಲೆಶೀಲ, ಬಸವಣ್ಣ "
ವಚನಾರ್ಥ :-
ಹಣವಿದ್ದಾಗ ಮನುಷ್ಯನಿಗೆ ಎಲ್ಲ ಬಗೆಯ ಗೌರವ ಮರ್ಯಾದೆಗಳು ದೊರಕುತ್ತವೆ. ಅನೇಕ ದುರ್ವರ್ತನೆಗಳು ದ್ರೋಹಗಳು ಸುಲಭವಾಗಿ ಮರೆಯಾಗುತ್ತವೆ. ಎಷ್ಟೇ ಅನಿರೀಕ್ಷಿತ ಘಟನೆಗಳು ನಡೆದಂತೆ ಅಹಂಕಾರವು ಮನುಷ್ಯನಲ್ಲಿ ಬೆಳೆಯುತ್ತದೆ. ಆ ಹಣ ಹೋದ ಮೇಲೆ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡಬೇಕು. ಇಂತಹ ಪರಿಸ್ಥಿತಿಯಲ್ಲಿ ಹೊಟ್ಟೆಗೆ ಹೊಲೆ, ಶೀಲ, ಮಡಿ, ಮೈಲಿಗೆಗಿಂತ ಹೊಟ್ಟೆ ತುಂಬಿಸಿ ಕೊಳ್ಳುವುದು ಮುಖ್ಯವಾಗುತ್ತದೆ. ಇದ್ದಾಗ ವಸ್ತ್ರದಲ್ಲಿ ಮುಚ್ಚಿ ತಿನ್ನುವ ಮನುಷ್ಯ ಇಲ್ಲದಾಗ ಅದನ್ನೇ ಜೋಳಿಗೆಯಾಗಿಸಿಕೊಳ್ಳುವ ದಾರಿದ್ರ್ಯಕ್ಕಿಳಿಯುತ್ತಾನೆ.


0 Comments