Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 521

 

ಮೌನೇಶ್ವರರ ವಚನಗಳು - 521

" ತವರ ತಾಮ್ರವನು ವಿವರದಲಿ ಕೂಡಿಸಿ ಮಾಡಿದ 
ಹರನ, ಓಂಕಾರದ ಹರಿವಾಣದೊಳು ಬಿಟ್ಟು 
ಎಲೆಯ ಹೊಲಿದು ತಿಂಬುವದು ಉಚಿತವೆ, 
ಇದು ನಮ್ಮ ಕೆರವಿನ ಹೊಲಿಗೆಂದು ಅರಿಯರು
ಹೂಲೆ ಪಾಂಚಾಳರು, ಬಸವಣ್ಣ "

ವಚನಾರ್ಥ :-
ಕಲಾ ಜ್ಞಾನಿಯಾದ ಪಾಂಚಾಳನು ಅಥವಾ ವಿಶ್ವಕರ್ಮ ಕುಲದ ಕಮ್ಮಾರನು ಲೋಹ ವಿದ್ಯೆಯಲ್ಲಿ ಪರಿಣಿತನು. ತವರ ತಾಮ್ರವನು ಹದವಾಗಿ ಮಿಶ್ರಣ ಮಾಡಿ ಪಂಚಲೋಹದಲ್ಲಿ ಹರನನ್ನೇ ಸೃಷ್ಟಿ ಮಾಡುವಂತ ಸೃಷ್ಟಿ ಪುರುಷನು. ಇಂತಹ ಸೃಷ್ಟಿಕರ್ತನಾದ ಪಾಂಚಾಳನು ಓಂಕಾರದಿಂದ ಹರಿವಾಣದಲ್ಲಿ ಹರನಿಟ್ಟು ಪೂಜಿಸಿ ಎಲೆ ಹೊಲಿದು ತಿನ್ನುವುದುಚಿತವೆ. ಇಂತಹ ಹೊಲಿದ ಹೊಲಿಗೆಯು ಸಮಗಾರನೊಬ್ಬ ಕೆರವಿಗೆ ಹಾಕಿದ ಹೊಲಿಗೆಯಂತಿರುತ್ತದೆ. ಎರಕಹೊಯ್ದು ಮೂರ್ತಿಮಾಡುವ ಪಾಂಚಾಳರು ಹರಿವಾಣ ಬಿಟ್ಟು ಇಂತಹ ಹೊಲಿದ ಎಲೆಯೊಳು ಉಣ್ಣುವರು ಎಂದು ಮೌನೇಶ್ವರರು ವ್ಯಂಗ್ಯ ಮಾಡುತ್ತಾರೆ.

Post a Comment

0 Comments