![]() |
| ಮೌನೇಶ್ವರರ ವಚನಗಳು - 524 |
" ಹೋರ ಮೇಲಿನ ಹುಣ್ಣು ಬಾಯಿ ಮೇಲೆ ಮೂಡಿದರೆ ನಾಯಿಗಳಿಗೆಲ್ಲಿಯ ಕುಲವಯ್ಯ,
ಲೋಕದ ಹಾಳು ಶಾಸ್ತ್ರವ ಬಿಡಬೇಕು, ಬಸವಣ್ಣ "
ವಚನಾರ್ಥ :-
ಶಾಸ್ತ್ರದ ಹೆಸರಲ್ಲಿ ಜನರ ಶೋಷಣೆ ಮಾಡುತ್ತ ಜಾತಿ ಕುಲಗಳಲ್ಲಿ ಮೇಲು ಕೀಳು ಸೃಷ್ಟಿಸುವ, ನಡೆ ಮತ್ತು ನುಡಿಯಲ್ಲಿ ಹೊಂದಾಣಿಕೆಯಿಲ್ಲದ ಜನರು ನಾಯಿಗಳಿಗಿಂತ ಕುಲಹೀನರು, ಅತಿ ಭೋಗ ಬಯಸುವವರ ಹೋರ ಮೇಲೆ (ಯೋನಿ)ಹುಣ್ಣಾದಂತೆ ಅತಿ ಮಾತಾಡುವವರಿಗೂ ಮಾತು ತಪ್ಪುವವರಿಗೂ ವೃತನೇಮ ಇಲ್ಲದವರ ಬಾಯಿಗೂ ಭಗಕ್ಕೂ ಅಂಥ ವ್ಯತ್ಯಾಸವಿಲ್ಲ. ಮಾತು ಮತ್ತು ಕೃತಿಗೂ ಹೊಂದಾಣಿಕೆ ಇಲ್ಲದ ಸ್ಥಿತಿಯನ್ನು ವಚನ ಹೇಳುತ್ತದೆ.


0 Comments