Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 526

ಮೌನೇಶ್ವರರ ವಚನಗಳು - 526

" ಊರ ಹಿಂದಿನ ಗುಂಡ ಕಂಡವರು 
ಕಾಲೆದ್ದಿ ಕುಂಡಿ ಮುಂಡಗಳ ಅದರೊಳಗೆ ತೊಳೆದು 
ಕಂಡ ನಾಯಿ ನರಿ ಕತ್ತೆ ಕಾಗೆಗಳು ಕೂಡಿ 
ಉಂಡ ಮೇಲೆ ಛೀ ಆಯಿತಯ್ಯ ನಿಮ್ಮ ಆಚಾರ, ಬಸವಣ್ಣ "

ವಚನಾರ್ಥ :-
ಆಚಾರವಂತರೆಂದು ಹೇಳಿಕೊಂಡು ಜುಟ್ಟು ಜನಿವಾರ ಹಿಡಿದು ಊರ ಹಿಂದಿನ ಹೊಂಡದ ನೀರಿನಲ್ಲಿ ಮುಳಿಗೆದ್ದು ಮಡಿಯಾದೆವೆಂದು ಮೆರೆಯುವ ಮಂದಿಗೆ ಮತಿಯಿಲ್ಲ. ಏಕೆಂದರೆ ಊರ ಹಿಂದಿನ ಹೊಂಡದಲ್ಲಿ ಕಂಡವರು ಕಾಲೆದ್ದಿ ಕುಂಡಿ ಮುಂಡಗಳ ತೊಳೆದು ಕಲುಷಿತಗೊಳಿಸಿರುತ್ತಾರೆ. ಅಂತಹ ನೀರಲ್ಲಿ ಮುಳುಗಿ ಮಡಿಯಾದವೆಂದರೆ ಏನರ್ಥ. ಕಂಡ ನಾಯಿ ನರಿ ಕತ್ತೆ ಕಾಗೆಗಳಂತಹ ಗುಣಹೀನರೊಡನೆ ಕೂಡಿ ಉಂಡು ಕುಲಗೇಡಿ ಆದ ಆಚಾರವಂತರು ತಮ್ಮ ಕುಲದ ಸೊಕ್ಕು ಬಿಡಲಾರರು.

Post a Comment

0 Comments