![]() |
| ಮೌನೇಶ್ವರರ ವಚನಗಳು - 527 |
" ಸಕ್ಕರಿ ಬೆಲ್ಲದೊಳು ಸರ್ವರ ಎಂಜಲವು
ಹಕ್ಕಿಯ ಎಂಜಲವು ಹಣ್ಣು ಕಾಯಿ ಫಲವು
ಕುಕ್ಕನ ಎಂಜಲವು ಕೃಷ್ಣಾಜಿನ ಕೊರಳೊಳಗೆ ಕಟ್ಟಲು
ಠಕ್ಕಾಯಿತಯ್ಯ ನಿಮ್ಮ ಆಚಾರವೆಲ್ಲ. ಬಸವಣ್ಣ "
ವಚನಾರ್ಥ :-
ವ್ಯಾಪಾರಿಯೊಬ್ಬ ಅಂಗಡಿಯಲ್ಲಿ ವ್ಯಾಪಾರಕ್ಕಾಗಿ ತೆರೆದಿಟ್ಟ ಸಕ್ಕರೆ ಬೆಲ್ಲವನ್ನು ಬಂದವರೆಲ್ಲ ತಿಂದು ರುಚಿ ನೋಡಿ ಕೊಳ್ಳುವಾಗ ಅದು ಸರ್ವರ ಎಂಜಲಾದಂತೆ. ಪೂಜೆಗೆ ಬಳಸುವ ಹಣ್ಣು, ಕಾಯಿ, ಫಲವು ಹಕ್ಕಿಯ ಎಂಜಲು. ಬಳಸುವ ಕೃಷ್ಣಾಜಿನ ನಾಯಿಯ ಎಂಜಲು. ಹೀಗೆ ಎಂಜಲಗೊಂಡ ಪದಾರ್ಥಗಳನ್ನೇ ಮೀಸಲು ವಸ್ತುವೆಂದು ಭ್ರಮಿಸಿ ದೇವರಿಗೆ ಅರ್ಪಿಸುವ ನಿಮ್ಮ ಆಚಾರ ಮೋಸದ್ದಲ್ಲವೆ. ಅದು ಪವಿತ್ರ ಮತ್ತು ಶ್ರೇಷ್ಠ ಹೇಗಾದೀತು ಎಂದು ಮೌನೇಶ್ವರರು ಪ್ರಶ್ನಿಸುತ್ತಾರೆ.

0 Comments