Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 771

ಮೌನೇಶ್ವರರ ವಚನಗಳು - 771

" ರೊಕ್ಕ ಉಳ್ಳವರಿಗೆ ಮಕ್ಕಳಾದಾವು 
ಮಕ್ಕಳುಳ್ಳವರಿಗೆ ಅನುವರಿತು ದಕ್ಕನೆ ಬಂದಾವು 
ಆಪತ್ತಿನ ದಿನಗಳು
ಕಕ್ಕಯ್ಯನಾಣೆ ಸಟೆಯಲ್ಲ, ಬಸವಣ್ಣ "

ವಚನಾರ್ಥ :-
ಇಂದಿನ ಬಾಡಿಗೆ ತಾಯ್ತನದ ಸಂಗತಿಗಳನ್ನು ವಚನ ಸೂಚಿಸುತ್ತಿದೆಯೆ? ಪರಿಸರ ನಾಶದ ಭೀತಿ ಮನುಷ್ಯನ ಹಾರ್ಮೋನುಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಆಧುನಿಕ ಕಾಲದ ಆಹಾರ, ಕೆಲಸದ ಸ್ವರೂಪ ಹಾಗೂ ಒತ್ತಡದ ಪರಿಣಾಮದಿಂದ ಗಂಡಸಿನಲ್ಲಿ ವೀರ್ಯವೃದ್ಧಿ ಕಡಿಮೆಯಾಗುತ್ತಿರುವ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ವೀರ್ಯ ಸಂಸ್ಕರಣದಿಂದ ಇಂದು ಬಾಡಿಗೆ ತಾಯಿಯರಿಗೆ ಹಣ ನೀಡಿ ಅವರಲ್ಲಿ ಸಂತಾನ ಪಡೆಯುವ ಶ್ರೀಮಂತರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ. ಶ್ರೀಮಂತರಿಗೆ ಮಕ್ಕಳ ಹಪಾಹಪಿ ಇದ್ದರೆ, ಮಕ್ಕಳಿದ್ದವರಿಗೆ ಕಠಿಣ ಬಡತನ ಹಾಗೂ ಆಪತ್ತಿನ ಗೊಡವೆ ಇರುತ್ತದೆ. ಬದುಕಿನ ನಿರ್ವಹಣೆಗೆ ಪಾಡು ಪಡಬೇಕಾಗುತ್ತದೆ. ಇದು ವಚನದ ಸಾರ.

Post a Comment

0 Comments