ಶ್ರೀ ಮೌನೇಶ್ವರ ವಚನ ಮಾಲಿಕೆ - 775

ಮೌನೇಶ್ವರರ ವಚನಗಳು - 775

" ಶಾಸ್ತ್ರದ ಪರಾಕ್ರಮವು ಸೂತ್ರ ಆಧಾರಕ್ಕೆ
ವಸ್ತ್ರ ಪಾತ್ರಗಳು ಧನಧಾನ್ಯ ವಿದ್ಯಾರತ್ನ
ಶಾಸ್ತ್ರ ಅತಿಗಳಿವರು, ಬಸವಣ್ಣ "

ವಚನಾರ್ಥ :-
'ಸೂತ್ರ' ಎನ್ನುವುದು ತತ್ವನಿರ್ಣಯ ಮಾಡುವ ಅಥವಾ ಕಟ್ಟುವ ಕ್ರಿಯೆಗೆ ಆಧಾರವಾದ ವಿಶ್ವಕರ್ಮ ತತ್ವ ಸೂತ್ರ ಅಂದರೆ ದಾರ, ಅಳತೆ, ಕಂಬ ಎನ್ನುವ ಅರ್ಥಗಳು ಶಿಲ್ಪಶಾಸ್ತ್ರದಲ್ಲಿ ಬರುತ್ತವೆ. ಶಾಸ್ತ್ರ ಹಾಗೂ ಪರಾಕ್ರಮಗಳಿಗೆ ಆಧಾರ ಭೂತವಾದದ್ದು ಸೂತ್ರ. ಈ ಸೂತ್ರದಿಂದಲೇ ವಸ್ತ್ರ, ಪಾತ್ರೆ, ಧನ, ಧಾನ್ಯ, ವಿದ್ಯೆ, ಸಂಪತ್ತು, ಅಧಿಕಾರ ಎಲ್ಲವು ಹುಟ್ಟುತ್ತವೆ. ಸೃಷ್ಟಿಯ ಮೂಲವೇ ಸೂತ್ರ ಪಂಚಾಳರ ಎಲ್ಲ ಕೆಲಸಗಳಲ್ಲಿ ಸೂತ್ರ ಅಂದರೆ ದಾರ, ಅಳತೆ, ಬಹುಮುಖ್ಯ. ಚಾಲುಕ್ಯರ ಕಾಲದಲ್ಲಿ ಪ್ರಮುಖ ಶಿಲ್ಪಿಗೆ ಸೂತ್ರದಾರ ಎಂದು ಕರೆದದ್ದು ಶಾಸನಗಳಲ್ಲಿ ಉಲ್ಲೇಖವಿದೆ. ಇಡೀ ಬಯಲಾಟವನ್ನು ಶಿಸ್ತು ಬದ್ಧವಾಗಿ ನಡೆಸುವವನಿಗೂ ಸೂತ್ರ ದಾರ ಎಂದು ಕರೆಯಲಾಗುತ್ತದೆ. ಹೀಗೆ ಸೂತ್ರದ ಪ್ರಾಮುಖ್ಯತೆಯನ್ನು ತಿಳಿಸುವ ವಚನವಿದಾಗಿದೆ.

Post a Comment

0 Comments