ಶ್ರೀ ಮೌನೇಶ್ವರ ಹುಷಾರ ವಚನ - ಎರಡು

ಮೌನೇಶ್ವರರ ಹುಷಾರ ವಚನಗಳು - ಎರಡು

" ನಾ ಹೆಚ್ಚು ನೀ ಹೆಚ್ಚು ಎಂದು ನುಡಿಯ ಬೇಡಿ 
ಹೆಚ್ಚಿನ ರುದ್ರರು ಬಂದಾರು 
ಬಚ್ಚಿಟ್ಟ ನಿಮ್ಮ ದೇಹ ಹೆಚ್ಚಿ ಹೋಳನೆ ಮಾಡಿ 
ಕಿಚ್ಚನೆ ಇಕ್ಕುವರು ಬಹು ಹುಷಾರ "

ವಚನಾರ್ಥ :-
ಅಹಂಕಾರ ಎಂಬುದು ಒಳ್ಳೆಯದಲ್ಲ. ನಾನೇ ಹೆಚ್ಚು ನಾನೇ ಹೆಚ್ಚು ಎನ್ನುವ ಮೇಲಾಟದ ಮಾತಾಡಬೇಡಿ. ಎಲ್ಲರೂ ಸಮಾನರು ಎಂಬ ತಿಳುವಳಿಕೆ ಒಳ್ಳೆಯದು. ಎಲ್ಲರಿಗೂ ಹೆಚ್ಚಿನವರಾದವರು ಶಿವಭಕ್ತರು. ಅವರು ಶಿವಗಣ, ರುದ್ರಗಣದವರು. ಅವರು ಶಿವನ ಅಪ್ಪಣೆಯಿಂದ ಭೂಲೋಕಕ್ಕೆ ಬಂದವರು. ಅವರ ಮುಂದೆ 'ನಾನು' ಎಂಬ ಅಹಂಕಾರ ಉಳಿಯುವುದಿಲ್ಲ. ಬಹಳ ಪ್ರೀತಿಯಿಂದ ಜೋಪಾನ ಮಾಡಿಕೊಂಡು ಬಂದ ದೇಹವನ್ನು ಹಾಗೂ ದೇಹ ಭಾವನೆಯನ್ನು ಅವರು ಕೊಚ್ಚಿ ಹಾಕಿ ಬೆಂಕಿ ಹಚ್ಚುತ್ತಾರೆ. ಎಂದರೆ ದೇಹ ನಶ್ವರ, ಶಿವ ಶಾಶ್ವತ ಎಂಬ ಸತ್ಯವನ್ನು ತೋರಿಸಿಕೊಡುತ್ತಾರೆ ಮೌನೇಶ್ವರರು.

Post a Comment

0 Comments