ಶ್ರೀ ಮೌನೇಶ್ವರ ಹುಷಾರ ವಚನ - ಮೂರು


ಮೌನೇಶ್ವರರ ಹುಷಾರ ವಚನಗಳು - ಮೂರು

" ಎಲ್ಲಾ ಬಲ್ಲೆನೆಂಬ ಬಲ್ಲತನವ ನುಡಿಯಲಿ ಬೇಡಿ
ನಿಮ್ಮ ಹಲ್ಲುಗಳ ಮುರಿಯಲಿಕ್ಕೆ ಅಲ್ಲಮಪ್ರಭು ಬಂದಾನು 
ಖುಲ್ಲ ಮಾನವರಿಗೆ ತಿಳಿಯದು ಬಹು ಹುಷಾರ "

ವಚನಾರ್ಥ :-
ನಾನೇ ಹೆಚ್ಚು, ನನಗೆಲ್ಲ ತಿಳಿದಿದೆ ಎಂಬುದು ಸಾಮಾನ್ಯ ಜನರ ಧೋರಣೆ. ಜ್ಞಾನ ಸಾಗರದ ವಿಶಾಲತೆಯನ್ನು ತಿಳಿದವನು ತನಗೆಷ್ಟೇ ವಿಷಯಗಳು ಗೊತ್ತಿದ್ದರೂ ಅದು ಸಾಗರದ ಒಂದು ಹನಿಯಷ್ಟು ಎಂಬ ಸತ್ಯವನ್ನು ಅರಿತಿರುತ್ತಾನೆ. ನಾನು ಎಂಬ ಅಹಂಕಾರದಿಂದ ಮೆರೆಯುವವರನ್ನು ಸರ್ವಜ್ಞನಾದ ಪರಮಾತ್ಮನವತಾರಿ ಮೌನೇಶ್ವರರು ಬಂದು ಅವರ ಹಲ್ಲು ಮುರಿಯುತ್ತಾರೆ. ಅವರ ಹಮ್ಮನ್ನು ಅಡಗಿಸುತ್ತಾರೆ ಎಚ್ಚರ.

Post a Comment

0 Comments