ಶ್ರೀ ಮೌನೇಶ್ವರ ವಚನ ಮಾಲಿಕೆ - 792

ಮೌನೇಶ್ವರರ ವಚನಗಳು - 792

" ಬಿಜ್ಜಳನ ಕೂಡ ಸಜ್ಜತನವ್ಯಾಕೆ ದುರ್ಜನತನವ್ಯಾಕೆ 
ಕಲ್ಯಾಣದ ಹೆಜ್ಜೆ ಬಂದೈತೆ ಪರಾಮರಿಕೆ 
ಅರ್ಥಕ್ಕೆ ಪ್ರಾಣಕ್ಕೆ ಕರ್ತರು ಬರುತಾರೆ ಮರತಿರಬ್ಯಾಡಿ 
ಮನದೊಳಗೆ ದುರಿತ ದೋಷದೊಳು ದೊಡ್ಡವನಾಗಬೇಕೆಂದರೆ ನಮ್ಮ ಕಂಡದ್ದೆ ಕೂನ ಗುರುತ 
ನಿಮ್ಮ ನುಡಿಗೆ ಶರಣಾರ್ಥಿ, ಬಸವಣ್ಣ "

ವಚನಾರ್ಥ :-
ರಾಜರೊಂದಿಗೆ ಗೆಳೆತನವು ಬೇಡ ಹಗೆತನವೂ ಬೇಡ, ಶರಣರಾದವರಿಗೆ ಕಲ್ಯಾಣದಿಂದ ಹೊಸ ದಾರಿ ಮೂಡಿ ಹಣ ಮತ್ತು ಪ್ರಾಣಕ್ಕೆ ಲೆಕ್ಕ ಕೇಳುವವರು ಬರುತಾರೆ. ಮೈಮರೆಯ ಬೇಡಿ, ಮನದೊಳಗೆ ಎಚ್ಚರವ ಹಿಡಿಯಿರಿ, ದುರಿತ ದೋಷಗಳ ಮೀರಿ ಸಾಧಕರಾಗಬೇಕೆಂದರೆ ನಮ್ಮ ಕೂನ ಗುರುತ ಅರಿತು ಅರ್ಥ ಮಾಡಿಕೊಳ್ಳಿರಿ ಜಾಗೃತರಾಗಿರಿ.

Post a Comment

0 Comments