Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 484

ಮೌನೇಶ್ವರರ ವಚನಗಳು - 484

 " ಮೋಡೆಲ್ಲ ಮಳೆಯಾಗಿ ನಾಡೆಲ್ಲ ಬೆಳೆಯಾಗಿ
ಚಾಡಿಗಾರರೆಲ್ಲರ ಕುಲಕ್ಷಯವಾಗಿ
ನಾಡಿಗೆ ಒಬ್ಬ ಅರಸಾಗಿ ಅಂದಿಗೆ 
ಚಲೋ ದಿನಗಳು ಬಂದಾವು, ಬಸವಣ್ಣ "

ವಚನಾರ್ಥ :-
ಇದೊಂದು ಕಾಲಜ್ಞಾನದ ವಚನವಾಗಿದ್ದು ಮನುಷ್ಯ ನಿರ್ಮಿತ ಹಲವಾರು ಸಮಸ್ಯೆಗಳಿಂದ ಇಡೀ ಪ್ರಕೃತಿ ಮತ್ತು ಮನುಷ್ಯ ಲೋಕ ಇಂದು ಹೊತ್ತಿ ಉರಿಯುತ್ತಿವೆ. ಇದರ ಕೊನೆ ಎಂದರೆ ಪ್ರಳಯ ಮತ್ತು ನಾಶ. ನಂತರ ಹೊಸ ಸೃಷ್ಟಿ, ಇಂಥ ಹೊಸ ಸೃಷ್ಟಿಯಲ್ಲಿ ಬಂಜೆಯಾಗಿದ್ದ ಮೋಡಗಳು ತುಂಬಿಕೊಂಡು ಮಳೆ ಸುರಿಸುತ್ತವೆ. ಅದರಿಂದಾಗಿ ಬರಡಾದ ಭೂಮಿ ಬೆಳೆದು ನಾಡೆಲ್ಲ ಫಲವಾಗುತ್ತದೆ. ಚಾಡಿಕಾರರ, ಮನೆ ಮುರುಕರ ವಂಶವೇ ನಾಶವಾಗಿ ನಾಡಿಗೊಬ್ಬ ಧೀಮಂತ ನಾಯಕ ಬಂದು ಆಳ್ವಿಕೆ ಮಾಡುತ್ತಾನೆ ಎನ್ನುವಲ್ಲಿ ಪ್ರಕೃತಿಯ ನಾಶ ಮತ್ತು ಪುನರ್‌ಸೃಷ್ಟಿ ಕ್ರಿಯೆಗಳನ್ನು ಕಾಣಬಹುದು. ಮೌನೇಶ್ವರರೊಬ್ಬ ಆಶಾವಾದಿ, ಮನರಚನಾವಾದಿ ಎನ್ನುವುದು ಗಮನಾರ್ಹ.

Post a Comment

0 Comments