ಶ್ರೀ ಮೌನೇಶ್ವರ ಹುಷಾರ ವಚನ - ಏಳು

ಮೌನೇಶ್ವರರ ಹುಷಾರ ವಚನಗಳು - ಏಳು

" ಮೋನಯ್ಯನ ಮಾತು ಚಾಣದ ಹದನದಂತೆ 
ನಾನು ನೀನೆಂಬ ಮತ್ಸರವ ಬಿಟ್ಟು  ಜ್ಞಾನವುಳ್ಳವರು 
ಬೇಕಾದರೆ ಬೆರಕೊಳ್ಳಿ, ಸಾಕಾದರೆ ಸರಕೊಳ್ಳಿ, ಏಕಮನವಾದರೆ 
ತಿಳಕೊಳ್ಳಿ, ಲೋಕದಂತಾದರೆ ಕರಕೊಳ್ಳಿ ಬಹು ಹುಷಾರ "

ವಚನಾರ್ಥ :-
ಮೌನೇಶ್ವರರು ತಮ್ಮ ವಚನಗಳು ತೀಕ್ಷ್ಣವಾಗಿರುತ್ತವೆ, ಮತ್ತು ಅಜ್ಞಾನಿಗಳಿಗೆ ಖಾರವಾಗಿರುತ್ತವೆ ಎಂದು ಹೇಳಿದ್ದಾರೆ. ಏಕೆಂದರೆ ಅವು ಕಠೋರ ಸತ್ಯವನ್ನು ಖಡಾಖಂಡಿತವಾಗಿ ಹೇಳುತ್ತವೆ. ಭೇದಗಳನ್ನು ಬಿಡಿರಿ ಜ್ಞಾನಿಗಳಾಗಿರಿ ಎಂಬುದು ಅವರು ಪದೇ ಪದೇ ಹೇಳುವ ಬೋಧೆ. ಐಕ್ಯತೆಯ ತತ್ವ ಅವರದು. ಲೋಕ ಕಲ್ಯಾಣಕ್ಕೆ ಉಪಯುಕ್ತವಾದುದನ್ನೇ ಅವರು ಹೇಳಿದ್ದಾರೆ. 'ಬೇಕಾದವರು ಬೆರಕೊಳ್ಳಿ' ಎಂಬ ಮಾತಿನಲ್ಲಿ ಹೊಂದಾಣಿಕೆ ಗುಣ ಮನುಷ್ಯನಿಗೆ ಮುಖ್ಯವಾದುದೆಂಬ ಭಾವ ಇದೆ.

Post a Comment

0 Comments