ಶ್ರೀ ಮೌನೇಶ್ವರ ಹುಷಾರ ವಚನ - ಆರು

ಮೌನೇಶ್ವರರ ಹುಷಾರ ವಚನಗಳು - ಆರು 


" ಹೇಸಿಗೆಯ ಮಾತೆಂದು ಬೇಸರ ನುಡಿಯಲಿಬೇಡಿ
ಸಾಸಿರ ನಾಮದ ಒಡೆಯ ಹೌದೆಂದು,
ನಿಮ್ಮ ವಾಸಿ ಪಂಥವ ಬಿಟ್ಟು ಭಾಷೆ ಪಾಲಿಪ
ದೇವನ ನಂಬಿರೋ ಭಕ್ತರಾದವರು ಬಹು ಹುಷಾರ "


ವಚನಾರ್ಥ :-
ಸಾಸಿರ ನಾಮದ ಒಡೆಯನೆಂದು ಕೃಷ್ಣ, ರಾಮ, ವಿಠಲನ ಭಕ್ತರು ದೇವರನ್ನು ಕರೆಯುತ್ತಾರೆ. ಅಂಥವರು ಬೇರೆ ಮತ ,ಪಂಥಗಳವರೊಡನೆ ಸಹಿಷ್ಣುತೆಯಿಂದ ಇರಬೇಕು. ವಾಸಿಪಂಥ ಎಂದರೆ ದ್ವೇಷ, ಛಲಗಳನ್ನು ಸಾಧಿಸಬಾರದು. ತಾವು ಹೇಳುವ ಮಾತುಗಳು ಗ್ರಾಮ್ಯವಾಗಿವೆ ಎಂದು ಬೇಸರ ಪಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ ಮೌನೇಶ್ವರರು. 

Post a Comment

0 Comments