ಶ್ರೀ ಮೌನೇಶ್ವರ ಹುಷಾರ ವಚನ - ಐದು

ಮೌನೇಶ್ವರರ ಹುಷಾರ ವಚನಗಳು - ಐದು

" ಪತ್ತಾರರಿಗೆ ಪಟ್ಟವಾಗುವುದೇ ಸಹಜ 
ದಿಟ್ಟರಾದವರು ಗಟ್ಟ್ಯಾಗಿ ನೆಲೆಗೊಳ್ಳಿರಿ, ಬಿಟ್ಟರೆ ಕೆಟ್ಟು ಹೋದೀರಿ ನೀವು ಸೃಷ್ಟಿಗೆ ಕಾರಣಕರ್ತರು ಹೌದೆಂದು
 ಗಟ್ಟ್ಯಾಗಿ ನಂಬಿರೋ ಭಕ್ತರಾದವರು ಬಹು ಹುಷಾರ "

ವಚನಾರ್ಥ :-
ಪತ್ತಾರರಿಗೆ(ವಿಶ್ವಕರ್ಮರಿಗೆ) ಪಟ್ಟವಾಗುವುದು ಸಹಜ ಎನ್ನುವಲ್ಲಿ ಬಂಗಾರವು ತುಟ್ಟಿಯಾಗಿ ಅಕ್ಕಸಾಲಿಗರಿಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸ ಮಾಡುವವರಿಗಾಗಿ ಹುಡುಕಬೇಕಾಗುತ್ತದೆನ್ನುವ ಅರ್ಥ ಒಂದಾದರೆ, ಈ ವಚನ ವಿಶ್ವಕರ್ಮರನ್ನೇ ನೇರವಾಗಿ ಸಂಬೋಧಿಸಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಪತ್ತಾರರಿಗೆ ಪಟ್ಟವಾಗುವುದು ಎಂದರೆ ಹಿಂದೂ ಧರ್ಮದ ಗುರುಪಟ್ಟ ಎಂದೂ ತಿಳಿಯಬೇಕು. ರಾಜಕೀಯ ಪಟ್ಟವಲ್ಲ, ಆ ಸ್ಥಾನಕ್ಕೆ ಬೇಕಾದ ಭಕ್ತಿಯನ್ನು ಧೀರತ್ವವನ್ನು, ದೃಢತೆಯನ್ನು ಅವರು ಪಡೆಯಬೇಕು. ಆಲಸ್ಯ, ತಾತ್ಸಾರ ಮಾಡಿದರೆ ಕೆಟ್ಟು ಹೋಗುವಿರಿ ಎಂದೂ ಸಹ ಎಚ್ಚರಿಸಿದ್ದಾರೆ ಮೌನೇಶ್ವರರು. 'ನೀವು(ವಿಶ್ವಕರ್ಮರು) ಸೃಷ್ಟಿಗೆ ಕಾರಣ ಕರ್ತರು' ಎಂಬುದಕ್ಕೆ ವೇದಗಳ ಕಾಲದಿಂದಲೂ ಆಧಾರಗಳಿವೆ. ಇದನ್ನು ಗಟ್ಟಿಯಾಗಿ ನಂಬಿ ಎಂದು ಎಚ್ಚರಿಸುತ್ತಾರೆ ಮೌನೇಶ್ವರರು.

Post a Comment

0 Comments