Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 508

ಮೌನೇಶ್ವರರ ವಚನಗಳು - 508

" ಎತ್ತು ಎಮ್ಮಿಗೆ ಕುಲವು, ಕತ್ತೆ ಕುದುರೆಗೆ ಕುಲವು
ಸತ್ಯ ಶರಣರಿಗೆ ಯಾತರ ಕುಲವಯ್ಯ, 
ನಮ್ಮ ನಿರ್ತು ಇದ್ದಲ್ಲಿ ಕೇಳಬಹುದು, ಬಸವಣ್ಣ "

ವಚನಾರ್ಥ :-
ಈ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗಳಿಗೆ ಹೇಗೆ ತನ್ನದೇ ಆದ ತಳಿ ಅಥವಾ ಜಾತಿ ಕುಲಗಳಿವೆಯೋ ಹಾಗೆ ಪ್ರಾಣಿಯಂತೆ ವಿವೇಕರಹಿತವಾಗಿ ಬದುಕುವ ಮನುಷ್ಯನಿಗೆ ಕುಲದ ಮದ ಜಾತಿಮದ ಇರುತ್ತದೆಯೇ ಹೊರತು ಇಂತಹ ಕುಲ ಮದ ಹಾಗೂ ಗುರುತುಗಳನ್ನು ಮೀರಿದ ಯೋಗಿಗೆ ಯಾವ ಕುಲದ ಹಂಗು ಇರುವುದಿಲ್ಲ. ಅವನು ಕುಲಾತೀತ ಮತ್ತು ಜಾತ್ಯಾತೀತ.

Post a Comment

0 Comments