![]() |
| ಮೌನೇಶ್ವರರ ವಚನಗಳು - 509 |
" ಕತ್ತಲೆ ಕಾಳಮ್ಮ ಹೊತ್ತದೆ ಪರಬ್ರಹ್ಮ
ಪೃಥ್ವಿಯೆಲ್ಲ ಜನಿಸಿದಳು,
ಇದರೊಳಗೆ ಆವಕುಲವೆಂದು ಬೆದಕಲಿ, ಬಸವಣ್ಣ "
ವಚನಾರ್ಥ :-
ಕತ್ತಲೆ ಕಾಳಮ್ಮನ ಸ್ವರೂಪವಾದರೆ ಹೊತ್ತು ಪರಬ್ರಹ್ಮದ ಸ್ವರೂಪ, ಅಂದರೆ ಅಜ್ಞಾನವೆಂಬ ಕತ್ತಲು ಬೆಳಕಾಗಿ ಆ ಬೆಳಕೆ ಪರಬ್ರಹ್ಮ ಸ್ವರೂಪಿಯಾಗಿ ಇಡೀ ಭೂಮಂಡಲವನ್ನು ಬೆಳಗಿತು. ನಿರ್ಗುಣ ಮತ್ತು ಸಗುಣ ಇವೆರಡೇ ಜಗತ್ತಿನ ಮೂಲ. ಇವುಗಳಲ್ಲಿ ವ್ಯಕ್ತ ಬ್ರಹ್ಮಾಂಡವೇ ಅಡಗಿದೆ. ಈ ಮೂಲಕ್ಕೆ ಹೋದಾಗ ಜಾತಿ ಕುಲಗಳಿಗೆ ಅರ್ಥವಿರುವುದಿಲ್ಲ. ದೇವಿಯೇ ಬ್ರಹ್ಮಾಂಡವನ್ನು ಆವರಿಸಿದ್ದಾಳೆ. ಅವಳೇ ಜೀವ ಚೈತನ್ಯ ಹೀಗಿರುವಾಗ ಗಂಡು, ಹೆಣ್ಣು, ದೇವ, ದೇವಿ, ಕತ್ತಲು, ಬೆಳಕು ಎಂದು ಲಿಂಗ, ಜಾತಿ, ಕುಲಭೇದಗಳನ್ನು ಹುಡುಕದೇ ಮನುಷ್ಯ ಪೂರ್ಣತ್ವದತ್ತ ಸಾಗಬೇಕು.


0 Comments