Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 510

ಮೌನೇಶ್ವರರ ವಚನಗಳು - 510

" ಇಂದ್ರಿಯ ಸೂತಕವೊಂದೆ, ಕಂದನ ಜನಿತಗಳೊಂದೆ 
ಮಂದೆಲ್ಲ ಒಂದೆ ಮರಣಗಳು ಇದರೊಳು ಕುಂದು ಕೊರತೆಗಳೆಂಬ ಪರಿಹ್ಯಾಗೆ ಎಂದಿನ್ನು ನಂದಿಕೇಶ್ವರನ ವರಪುತ್ರ ಬಂದಿನ್ನು 
ಸಂದು ಹೇಳುವನು ಸಭೆ ಮೆಚ್ಚಿ, ಬಸವಣ್ಣ "

ವಚನಾರ್ಥ :-
ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಅವನು ಯಾವ ಕುಲದವನಾಗಿರಲಿ ಹುಟ್ಟು ಸಾವು ನೋವು ಬ್ಯಾನಿಗಳೊಂದೆ. ಅವನ ಸಾಮಾಜಿಕ ಸ್ಥಾನಮಾನವನ್ನು ನೋಡಿ ಸಾವು ನೋವುಗಳು ಬರುವುದಿಲ್ಲ. ಹೀಗಿರುವಾಗ ಮನುಷ್ಯರಲ್ಲಿ ಅನಗತ್ಯ ಭೇದವೇಕೆ, ವಿಂಗಡಣೆ ಏಕೆ. ಎಷ್ಟೋ ಸಾಧಕರು ಈ ಕುರಿತು ಜನರಿಗೆ ತಿಳಿಹೇಳುತ್ತ ಬಂದಿದ್ದರೂ ಮಾನವರಲ್ಲಿನ ಕಲ್ಪಿತ ಜಾತಿ ಹಾಗೂ ಕುಲದ ಅಸಮಾನತೆಗಳು ದೂರವಾಗಿಲ್ಲ ಇಂತಹ ಮೂಢರಿಗೆ ತಿಳಿಹೇಳಲು ನಂದಿಕೇಶ್ವರನ ವರಪುತ್ರ ಮೌನೇಶ್ವರರೇ  ಅವತರಿಸಿ ಬರುವರು.

Post a Comment

0 Comments