![]() |
| ಮೌನೇಶ್ವರರ ವಚನಗಳು - 511 |
" ಆರು ದರುಶನದಾಟವು ತೀರಿಹೋದ ಮೇಲೆ
ಮೀರಿ ಮಾಡುವದೆಲ್ಲ ಮರುಳಾಟ
ಊರಾಟ ನೋಡಿ ಉಣಬೇಕು,
ಹಿಂದಿನ ಹೋರಾಟವೆಲ್ಲ ಬಿಡಬೇಕು, ಬಸವಣ್ಣ "
ವಚನಾರ್ಥ :-
ಷಟ್ ದರುಶನಗಳು(ಸಾಂಖ್ಯ, ನ್ಯಾಯ, ಯೋಗ, ವೈಷೇಶಿಕ, ವೇದಾಂತ ಮತ್ತು ಮೀಮಾಂಸಾ) ಒಂದು ಕಾಲದ ಸಮಾಜದ ಭಾಗವಾಗಿದ್ದವು. ಪಾಂಡಿತ್ಯದ ಪ್ರತೀಕವಾಗಿದ್ದವು. ಕಾಲ ಸರಿದಂತೆ ಅವುಗಳ ಪ್ರಾಮುಖ್ಯತೆ ಕಡಿಮೆಯಾದರೂ ಅದೇ ಜ್ಞಾನವನ್ನಿಟ್ಟುಕೊಂಡು ಇಂದಿಗೂ ಮಾಡುವ ವಾದ ಹುಚ್ಚರಾಟವೆನಿಸುತ್ತದೆ. ಕಾಲಕ್ಕೆ ತಕ್ಕ ಹಾಗೆ ಹುಟ್ಟುವ ಹೊಸ ತಿಳುವಳಿಕೆಯನ್ನು ಪರಿವರ್ತನೆಗಳನ್ನು ನಮ್ಮದಾಗಿಸಿಕೊಳ್ಳಬೇಕೆ ಹೊರತು ಅರ್ಥಹೀನ ಆಚರಣೆಗಳಿಗೆ ಜೋತು ಬೀಳುವುದು ವ್ಯರ್ಥ ಹೋರಾಟವಾಗುತ್ತದೆ.


0 Comments