![]() |
| ಮೌನೇಶ್ವರರ ವಚನಗಳು - 513 |
" ಶೀಲವಂತಿಕೆಯೆಂಬ ನೂಲು ಮಾಲೆಗಳೇಕೆ
ನೂರೊಂದು ಕೋಟಿ ಸುರರು ನರರು ಸತ್ತಂಥ ರೋಹಿತವೆಲ್ಲವ ಉದಕವು ಉಂಡ ಮೇಲೆ ಶೀಲವೆಲ್ಲೈತಿ, ಬಸವಣ್ಣ "
ವಚನಾರ್ಥ :-
ಶೀಲ ಎಂಬುದು ಸದ್ಗುಣವು. ಇದನ್ನರಿಯದೇ ಶೀಲವಂತರೆಂದು ಜುಟ್ಟು ಜನಿವಾರ ಧರಿಸಿ ನೀರಲ್ಲಿ ಮುಳುಗಿ ಏಳುವುದು ಸದಾಚಾರವಲ್ಲ. ನೂರೊಂದು ಕೋಟಿ ಸುರ ನರರು ಸತ್ತಂತಹ ರಕ್ತವು ನೀರ ಸೇರಿದ ಮೇಲೆ ಅದೇ ನೀರಿನಲ್ಲಿ ಸ್ನಾನ ಮಾಡಿ ಶುದ್ಧರಾಗಿದ್ದೇವೆ ಎಂದು ಭಾವಿಸಿರುವ ನರರ ಶೀಲವೆಲ್ಲಿ ಉಳಿಯುತ್ತದೆ. ಮನುಷ್ಯನ ಮಲಿನತೆಯನ್ನು ಮಲಿನಗೊಂಡ ನೀರು ತೊಳೆಯಲಾರದು. ದೇಹದ ಮಲಿನತೆಗಿಂತ ಮನದ ಮಲಿನತೆ ತೊಳೆಯಬೇಕು.


0 Comments