Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 515

ಮೌನೇಶ್ವರರ ವಚನಗಳು - 515

" ಭಕ್ತಿಯೆಲ್ಲ ಭತ್ತದೊಳಗೈತಿ ಭತ್ತಗಳು ಹೋದ ಮರುದಿನ 
ಎತ್ತಿನ ಜತ್ತಿಗೆಯ ಸುಟ್ಟು ಮೆಲಿಬೇಕು, 
ಲೋಕದ ಹೊಟ್ಟು ಶಾಸ್ತ್ರವ ಬಿಡಬೇಕು, 
ಎಂದಿನ್ನು ಕಕ್ಕಯ್ಯನ ವರಪ್ರಸಾದಿ, ಬಸವಣ್ಣ "

ವಚನಾರ್ಥ :-
ಭತ್ತ ಅಂದರೆ ಅನ್ನ. ಮನುಷ್ಯನ ಅಗತ್ಯಗಳಲ್ಲಿ ಒಂದು. ಭತ್ತ ಸಮೃದ್ಧತೆಯ ಸಂಕೇತವೂ ಹೌದು. ಇಂತಹ ಭತ್ತ ಪ್ರಾಕೃತಿಕ ವಿಕೋಪಗಳು ಹಾಗೂ ಮನುಷ್ಯ ನಿರ್ಮಿತ ಕಲುಷಿತ ವಾತಾವರಣ ಹಾಗೂ ಮಳೆಯ ಕೊರತೆಯಿಂದ ಬೆಳೆಯದ ನಾಶವಾಗಿ ಹೋದಾಗ ಅನ್ನದ ಹಾಹಾಕಾರ ಉಂಟಾಗುತ್ತದೆ. ಆಗ ಭಕ್ತಿಯೂ ಇಲ್ಲ, ಶೀಲವೂ ಇಲ್ಲ. ತೊಗಲು ಎನ್ನುವುದನ್ನು ಮರೆತು ಹಸಿವಿನ ಭೀಕರತೆಯಿಂದ ಎತ್ತಿನ ಕೊರಳಿಗೆ ನೊಗವನ್ನು ಕಟ್ಟಲು ಬಳಸುವ ಚರ್ಮದ ಪಟ್ಟಿಕೆಯಾದ ಜತ್ತಿಗಿಯನ್ನೇ ತಿಂದು ಬದುಕಬೇಕಾಗಬಹುದು. ಕಾರಣ ಹೊಟ್ಟಿನಂತಹ ಟೊಳ್ಳು ಶಾಸ್ತ್ರಗಳು ಹುಟ್ಟಿಸುವ ಹುಸಿ ಪಾಂಡಿತ್ಯ ಅವಾಸ್ತವವಾದುದು.

Post a Comment

0 Comments