Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 516

ಮೌನೇಶ್ವರರ ವಚನಗಳು - 516

" ಶೀಲವಂತಿಕೆಯೆಲ್ಲ ಜೋಳದೊಳಗೈತಿ
ಜೋಳಗಳು ಹೋದ ಮರುದಿನ 
ಹೇಲ ಮೇಲಣ ಕಾಳು ಆಯ್ದು ಮೇಲಿಬೇಕು, 
ಎಂದಿನ್ನು ಹೇಳಿದನು, ಚೆನ್ನಬಸವಣ್ಣ "

ವಚನಾರ್ಥ :-
ಅಕಾಲಿಕ ಹಾಗೂ ಅಲ್ಪಕಾಲಿಕ ಮಳೆ ಮಾರುತಗಳಿಂದಾಗಿ ಮನುಷ್ಯನ ಅನ್ನಕ್ಕೆ ಆಧಾರವಾದ ಜೋಳದ ಇಳುವರಿ ಕಡಿಮೆಯಾಗುತ್ತದೆ. ಇದಕ್ಕೆ ಪರಿಸರದ ಅನೇಕ ಸಂಗತಿಗಳು ಕಾರಣವಾಗಿವೆ. ಬರದ ಬೇಗುದಿ ತಾಳದೆ ಅನ್ನದ ಅಗತ್ಯಕ್ಕಾಗಿ ಮನುಷ್ಯ ಮಲದ ಮೇಲಿನ ಕಾಳನ್ನು ಆಯ್ದು ತಿನ್ನುವಂತಹ ಹೇಯ ಸ್ಥಿತಿ ಬಂದಾಗ ಆತನ ಶೀಲ ಚಾರಿತ್ರ್ಯಗಳು ಜಾತಿ ಕುಲ ಶ್ರೇಷ್ಠತೆಗಳು ಮಣ್ಣುಪಾಲಾಗುತ್ತವೆ ಎನ್ನುವದು ವಚನಾರ್ಥ.

Post a Comment

0 Comments