Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 517

ಮೌನೇಶ್ವರರ ವಚನಗಳು - 517

" ಮಾದಿಗರು ಮಾಡಿದ ಮಾಣಿಕದ ಮಡಿಕೆಯೊಳಗೆ
ಜಾಣ ಜಾಣರು ಉಣಬೇಕು, 
ಇದಕ್ಕೆ ವಾಣಿಗಳೇತಕೆ ಇದಕೆ ಒಪ್ಪ ಬಣ್ಣ ಎರಡುಂಟೆ, 
ಲೋಕದ ಮಾಣಿಯ ಮಕ್ಕಳು ಅರಿಯಿರೊ, ಬಸವಣ್ಣ "

ವಚನಾರ್ಥ :-
ಕುಲಭೇದ ಮೀರಿದವಗೆ ಕುಲಛಲದ ಮದವಿರದು. ಅಂತಹ ಸಾಧಕನು ಕುಲಭೇದವೆನ್ನದೆ ಕರೆದಲ್ಲಿ ಉಣ್ಣುವನು. ಇದಕ್ಕೆ ಯಾರ ಒತ್ತಾಯವು ಇರದು. ಎಲ್ಲವೂ ಒಂದೆ ಎಂದು ತಿಳಿದ ಸಾಧಕನಿಗೆ ಲೋಕ ಎರಡಲ್ಲ ಎಂಬುದನ್ನು ಅರಿಯಿರೋ ಎಂದು ಮೌನೇಶ್ವರರು ಹೇಳುತ್ತಾರೆ.

Post a Comment

0 Comments