![]() |
| ಮೌನೇಶ್ವರರ ವಚನಗಳು - 518 |
" ಎಲುಬಿನ ಶರೀರವು ತೊಗಲಿನ ಮಡತವು
ಕಿಲುಮಿ ಕೀಟಕದ ರಕ್ತವು ಇದರೊಳು
ಕುಲವೇನು ನಿಮ್ಮ ಛಲವೇನು, ಎಂದಿನ್ನು ಹೇಳಿದನು,
ಸಭೆ ಮೆಚ್ಚಿ ಕೇಳಿದನು ಮಲಹರನ ಮನೆಯ ಪಡಿಲೆಂಕ, ಬಸವಣ್ಣ "
ವಚನಾರ್ಥ :-
ಈ ಶರೀರವೆಂಬುದು ಎಲುಬು ತೊಗಲಿನಿಂದ ಆವೃತವಾದದ್ದು, ಎಲ್ಲರ ದೇಹದೊಳಗೂ ರಕ್ತಮಾಂಸ ತುಂಬಿರುವುದು. ಹೀಗಿರುವಾಗ ಮನುಷ್ಯರಲ್ಲಿ ಹೀನಕುಲ ಉತ್ತಮ ಕುಲ ಎಂದು ವಿಂಗಡಿಸಲುಬಾರದು ಎಂದು ಶಿವ ಸೇವಕರಾದ(ಭಕ್ತ) ಮೌನೇಶ್ವರರು ಹೇಳುತ್ತಾರೆ.


0 Comments