![]() |
| ಮೌನೇಶ್ವರರ ವಚನಗಳು - 519 |
" ಕುಲದ ವಾಸಿಗೆ ಆಡಿ, ಹೊಲದ ಮೇರೆಗೆ ಆಡಿ
ಹೊಲೆ ಕೂಳಿಗಾಗಿ ಹೊಡೆದಾಡಿ ಸತ್ತಂಥ
ಹೊಲೆಯರ ಗೊಡವಿ ನಮಗೇಕೆ,
ನಮ್ಮ ಶರಣರ ಹೊಲಬು ಮರ್ತ್ಯರಿಗೆ ತಿಳಿಯದು, ಬಸವಣ್ಣ "
ವಚನಾರ್ಥ :-
ಮನುಷ್ಯ ಬದುಕಿರುವವರೆಗೆ ಕೀರ್ತಿ, ಗೌರವ, ಜಾತಿ, ಕುಲ, ಹೊಲ, ಮನೆ ಸಂಪತ್ತಿಗಾಗಿಯೇ ಬಡಿದಾಡುತ್ತಾನೆ. ಅದನ್ನೇ ಬದುಕಿನ ಅಂತಿಮ ಸತ್ಯವೆಂದು ತಿಳಿದು ಅಜ್ಞಾನಿಯಾಗುತ್ತಾನೆ, ಸ್ವಾರ್ಥಿಯಾಗುತ್ತಾನೆ. ತುತ್ತು ಕೂಳಿಗಾಗಿ ಹೊಡೆದಾಡಿ ಸಾಯುವ ಅಜ್ಞಾನಿಯಾಗುತ್ತಾನೆ. ಅಂತಹ ಅಜ್ಞಾನಿಗಳನ್ನು ಮೌನೇಶ್ವರರು ಹೊಲೆಯರೆಂದು ಹೇಳಿದ್ದಾರೆ. ಹೊಲೆಯರ ಗೊಡವಿ ಸತ್ಯ ಶರಣರಿಗೆ ಸಲ್ಲದು, ನಿಜ ಶರಣರ ಮಾರ್ಗ ಇಂತಹ ಮಂದಮತಿಗಳಾದ ಮರ್ತ್ಯದ ಮಾನವರಿಗೆ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.


0 Comments