Advertisement

Main Ad

ಶ್ರೀ ಮೌನೇಶ್ವರ ವಚನ ಮಾಲಿಕೆ - 520

ಮೌನೇಶ್ವರರ ವಚನಗಳು - 520

" ಗಂಗೆಯೊಳು ಪುಳವಿರಲು ಘನ ಹೇಸಿಕೆಗಳಿಲ್ಲ, 
 ಅಂಗದೊಳು ಪುಳವಿರಲು 
ಅದನು ಅತಿಗಳೆದು ವಿಂಗಡಿಸುವರಲ್ಲಾ, ಬಸವಣ್ಣ "

ವಚನಾರ್ಥ :-
ಗಂಗೆ ಪವಿತ್ರಳು ಎಂಬುದು ಒಂದು ಕಾಲದ ಸತ್ಯವಾಗಿತ್ತು. ಇಂದು ಮಾನವನ ಅತಿಯಾದ ವಿಲಾಸಿ ಹಾಗೂ ವೈಭೋಗದ ಕಾರಣವಾಗಿ ಸ್ವಚ್ಛ ಮತ್ತು ಪವಿತ್ರವಾಗಿದ್ದ ನೀರು ತ್ಯಾಜ್ಯಗಳಿಂದ ಮಲಿನವಾಗಿ ಹುಳು ಮತ್ತು ಕೊಳಕಿನಿಂದ ತುಂಬಿರುವುದು. ಆದರೂ ಅದನ್ನು ಪವಿತ್ರವೆಂದೇ ಹಿಂದೂಗಳಾದ ನಾವು ಭಾವಿಸುತ್ತೇವೆ. ಅದೇ ರೀತಿ ಮನುಷ್ಯನ ದೇಹದ ಅಂಗದೊಳಗೆ ಇಂತಹ ಕಲ್ಮಷ ಇದ್ದಾಗ ಅದನ್ನು ನಿಷ್ಕಲ್ಮಶಗೊಳಿಸುವ ಬದಲಾಗಿ ಹೀಗಳೆಯುವುದು ತಿರಸ್ಕರಿಸುವುದು ಆತ್ಮ ಮತ್ತು ದೇಹವೆಂದು ವಿಂಗಡಿಸುವುದು ಸರಿಯಾದ ಕ್ರಮವಲ್ಲ. ದೇಹ ಮತ್ತು ಆತ್ಮದ ಹೊಂದಾಣಿಕೆ ಮನುಷ್ಯ ಸಾಧನೆಗೆ ಪೂರಕ, ಅದರ ವಿಂಗಡಣೆ ಸಾಧನೆಗೆ ಮಾರಕವಾಗುತ್ತದೆ.

Post a Comment

0 Comments