![]() |
| ಮೌನೇಶ್ವರರ ವಚನಗಳು - 522 |
" ಭೂಸುರರ ಕುಲವ ನಾಶ ಮಾಡಲಿಬೇಕೆಂದು
ನಾಶಿಯ ಗಿಡವನು ಕಳುಹಿದರು ಪ್ರಭುದೇವ
ಹೆಸರು ಯಾಕೊ, ತಮ್ಮ ಕುಲಗಳಿಗೆ ಇದು ಕಾಸಿ ಕರಗಿಸುವ ಪರಿಯಂತೂ ಇದು ಕಶ್ಯಪ ಕಳುಹಿದ ಪ್ರಸಾದ ಲೋಕದ
ವೇಶ್ಯಯರ ಮಕ್ಕಳಿಗೆ ತಿಳಿಯದು, ಬಸವಣ್ಣ "
ವಚನಾರ್ಥ :-
ಚಾತುರ್ವರ್ಣ ಪದ್ಧತಿಯಲ್ಲಿ ಮೇಲೆ ಬರುವ ಬ್ರಾಹ್ಮಣ ಕುಲ ಶ್ರೇಷ್ಠವೆಂದು ಉಳಿದ ಕುಲಗಳು ಅವರ ಆಜ್ಞಾಧಾರಕರಾಗಿ ಸೇವಾವೃತ್ತಿ ಮಾಡಬೇಕೆನ್ನುವ ನೀತಿ ಧರ್ಮ ಮತ್ತು ಪ್ರಭುತ್ವದ ಹೊಂದಾಣಿಕೆಯಿಂದಾಗಿ ಬೆಳೆದು ಬಂತು. ಇದು ಮನುಷ್ಯರಲ್ಲಿ ಶ್ರೇಷ್ಠ ಮತ್ತು ಹೀನ ಎನ್ನುವ ಜಾತಿ ಹಾಗೂ ಕುಲದ ಭೇದ ಬಿತ್ತಿ ಮನುಷ್ಯ ಕುಲವನ್ನು ಬೇರ್ಪಡಿಸಿತು. ಕುಲ ಮತ್ತು ಜಾತಿ ಕಾರಣವಾಗಿ ಸಮಾಜವನ್ನು ಒಡೆದ ಭೂಸುರರನ್ನು ನಾಶ ಮಾಡಲೆಂದು ಪ್ರಭುದೇವ ನಾಶ ಮಾಡುವ ಗಿಡ ಕಳುಹಿದನು. ಲೋಹವನ್ನು ಕಾಸಿ ಕರಗಿಸಿದಾಗ ಹೊಸರೂಪ ತಾಳುವಂತೆ ಕುಲಭೇದಗಳು ಕರಗಿ ನಾಶವಾಗಿ ಹೊಸ ಸಮಾಜ ಹುಟ್ಟಬೇಕು. ಅದಕ್ಕಾಗಿ ಮೌನೇಶ್ವರರಂತಹ ಹಲವು ಸಾಧಕರು ಹುಟ್ಟಿ ಬಂದು ಬೋಧಿಸಿದರೂ ಅಜ್ಞಾನಿಗಳಾದ ಈ ಲೋಕದ ಜನ ಅರ್ಥಮಾಡಿಕೊಳ್ಳಲಿಲ್ಲ. ಜಾತಿ ವಿನಾಶದ ಮಹತ್ವದ ಕಲ್ಪನೆಯನ್ನಿಲ್ಲಿ ಕಾಣಬಹುದು.


0 Comments