![]() |
| ಮೌನೇಶ್ವರರ ವಚನಗಳು - 523 |
" ಹಸಿಯ ತೊಗಲೊಳಗಣ ತುಪ್ಪ ಬಸಿ ಬಸಿದು ಉಂಡ ಮೇಲೆ
ಕೊಸರಾಡಬಹುದೆ ಕುಲಛಲಕೆ,
ಲೋಕದ ಮುಸುರಿಗೆ ಹತ್ತಿದ ನೊಣಗಳಿರಾ
ನಿಮ್ಮ ಪಿಸರು ಶಾಸ್ತ್ರವ ಬಿಡರ್ಯಾಕೊ, ಬಸವಣ್ಣ "
ವಚನಾರ್ಥ :-
ಮಡಿ ಮಡಿ ಎಂದು ಅಡಿಗಡಿಗೆ ಹಾರುವ ಮಂದಿ ತೊಗಲಚೀಲದೊಳಗಿನ ತುಪ್ಪವನ್ನು ಬಸಿದು ಉಂಡ ಮೇಲೆ ಕುಲಗೋತ್ರಗಳ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ?. ಮಾತು ಮತ್ತು ಕೃತಿಯೊಳಗೆ ಹೊಂದಾಣಿಕೆ ಇರದ ಲೋಕದ ಮಂದಿ ಮುಸುರಿಗೆ ಹತ್ತಿದ ನೊಣಗಳಂತೆ ಕುಲ ಛಲಕ್ಕೆ ಅಂಟಿಕೊಳ್ಳುತ್ತಾರೆ. ಇನ್ನಾದರೂ ನಿಮ್ಮ ಹುಸಿ ಹಾಗೂ ಕೊಳಕು ಶಾಸ್ತ್ರದ ನಿಯಮಗಳ ಬಿಟ್ಟು ಸಾರ್ಥಕವಾಗಿ ಬಾಳಿರಿ ಎಂದು ಮೌನೇಶ್ವರರು ಹೇಳಿ ಸಮನ್ವತಾ ಹಾದಿಯನ್ನಿಲ್ಲಿ ತೋರುತ್ತಾರೆ. ಪ್ರಸ್ತುತ ವಚನದಲ್ಲಿ ಜಾತಿ ವಿನಾಶದ ಪರಿಕಲ್ಪನೆಯನ್ನು ಕಾಣಬಹುದು.


0 Comments