![]() |
ಮೌನೇಶ್ವರರ ವಚನಗಳು - 772 |
" ಯಾಸಿ ಮಾತಾಡುವ ವೇಷಡಂಬಕನಲ್ಲ
ಪಾಷಾಣದ ಬವರೆ ಎದೆಶೂಲ ತ್ರಾಸು ಕಟ್ಟಳೆಯ
ಹಿಡಿದುಕೊಂಡು ಇರುವಾತನ ಕೂಡ
ಏಸೊಂದು ಮಾತು ನಿಮಗ್ಯಾತಕೆ, ಬಸವಣ್ಣ "
ವಚನಾರ್ಥ :-
ಅಕ್ಕಸಾಲಿ ವೃತ್ತಿ ಎನ್ನುವುದೇ ಪ್ರಾಮಾಣಿಕ ಮತ್ತು ನಿಷ್ಠುರವಾದುದು. ಉಳಿದ ನಾಲ್ಕು ವೃತ್ತಿಗಳು ಇದೇ ಬಗೆಯವು. ನಡೆ ಮತ್ತು ನುಡಿಶುದ್ಧತೆ ಪಾಂಚಾಳ ವೃತ್ತಿಗಳ ಜೀವಾಳ. ಹೀಗಾಗಿ ಮೌನೇಶ್ವರರು ಯಾಸಿ ಮಾತಾಡುವ ವೇಷಡಂಬಕನಲ್ಲ, ಒರೆಗಲ್ಲು ಎದೆಶೂಲ ತ್ರಾಸು ತಕ್ಕಡಿ ಹಿಡಿದು ಅಳತೆ ಪ್ರಮಾಣಗಳನ್ನು ನಿರ್ಧರಿಸುವವ ಒರೆಗೆ ಹಚ್ಚಿ ನೋಡುವವನ ಕೂಡ ಕಾಲಹರಣದಂತಹ ಅಜ್ಞಾನದ ಮಾತುಗಳು ಸಲ್ಲವು ಎಂದು ಹೇಳಿದ್ದಾರೆ.
0 Comments