ಶ್ರೀ ಮೌನೇಶ್ವರ ಹುಷಾರ ವಚನ - ನಾಲ್ಕು

ಮೌನೇಶ್ವರರ ಹುಷಾರ ವಚನಗಳು - ನಾಲ್ಕು

" ಎಚ್ಚರವ ಹೇಳಲಿಕ್ಕೆ ಅಚ್ಚ್ಯುತನು ಬಂದಾನು, 
ನಿಮ್ಮ ಕಿಚ್ಚುಗಣ್ಣಿನವನ ಕೂಡ ಮತ್ಸರ ಸಲ್ಲದು 
ಹುಚ್ಚು ಶಾಸ್ತ್ರವ ಬಿಟ್ಟು ಬಚ್ಚಿಟ್ಟು 
ನಂಬಿರೊ ಭಕ್ತರಾದವರು ಬಹು ಹುಷಾರ "

ವಚನಾರ್ಥ :-
ಕೆಲವು ಶಾಸ್ತ್ರಗಳು ಇದೇ ಸತ್ಯ ಹೀಗೇ ನಡೆಯಬೇಕು, ಇಲ್ಲದಿದ್ದರೆ ನರಕ ಪ್ರಾಪ್ತಿ ಮುಂತಾಗಿ ಜನರಲ್ಲಿ ಭಯ ತುಂಬುತ್ತಾ ಪರಮಾತ್ಮನಿಂದ ದೂರ ಮಾಡುತ್ತವೆ. ಅಂತಹ ಹುಚ್ಚು ಶಾಸ್ತ್ರಗಳನ್ನು ನಂಬದೆ ಪರಮಾತ್ಮನನ್ನು ಮಾತ್ರ ಭಕ್ತರಾದವರು ನಂಬಬೇಕು ಎಚ್ಚರ ಎಂದು ಮೌನೇಶ್ವರರು ಹೇಳುತ್ತಾರೆ.

Post a Comment

0 Comments